ಭಗೀರಥರ ಜನಪರ ಕಾಳಜಿಯನ್ನು ಎಲ್ಲರೂ ಮೈಗೂಡಿಸಿಕೊಂಡು ಸಾಗಬೇಕುಶ್ರೀ ಭಗೀರಥ ಮಹರ್ಷಿಗಳು ಭೂಮಿಗೆ ಗಂಗೆಯನ್ನು ಕರೆತಂದಿದ್ದನ್ನು ನಾನು ಬಾಲ್ಯದಲ್ಲಿದ್ದಾಗ ಕಥೆ ಹೇಳುತ್ತಿದ್ದರು. ಇಂತಹ ಮಹನೀಯರ ಜಯಂತಿಯನ್ನು ಆಚರಿಸುತ್ತಿರುವುದು ಬಹಳ ಅರ್ಥಪೂರ್ಣವಾಗಿದೆ ಎಂದು ಪುರಸಭೆ ಅಧ್ಯಕ್ಷ ಎಚ್.ಕೆ.ಪ್ರಸನ್ನ ತಿಳಿಸಿ, ಉಪ್ಪಾರ ಸಮಾಜದವರಿಗೆ ಶುಭಕೋರಿದರು. ಮಹರ್ಷಿ ಭಗೀರಥ ಅವರ ಜಯಂತಿಯನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ. ಈ ಜಯಂತಿ ಪ್ರಯುಕ್ತ ನಮ್ಮ ಸಮಾಜದ ಎಲ್ಲ ಗಣ್ಯರುಗಳು ಒಂದಡೆ ಸೇರಿ, ಜಯಂತಿಯನ್ನು ಆಚರಿಸಲಾಗುತ್ತಿದೆ. ಜಯಂತಿ ಪ್ರಯುಕ್ತ ಈ ದಿನ ಸಾರ್ವಜನಿಕರಿಗೆ ಅನ್ನ ಪ್ರಸಾದವನ್ನು ವಿತರಿಸಲಾಗುತ್ತಿದೆ ಎಂದರು.