ಐಕನಹಳ್ಳಿ ಗ್ರಾಮದೇವತೆ ಜಾತ್ರೆಐಕನಹಳ್ಳಿ ಗ್ರಾಮದ ಅಧಿದೇವತೆ ಐಕನಹಳ್ಳಿ ಅಮ್ಮನವರ ದೇವಾಲಯದಲ್ಲಿ ಮೂಲ ವಿಶೇಷ ಪೂಜೆಯನ್ನು ನೆರವೇರಿಸಿದ ನಂತರ ಸುಂದರವಾಗಿ ಅಲಂಕೃತಗೊಂಡಿದ್ದ ಬಂಡಿರಥಕ್ಕೆ ಪೂಜೆ ಸಲ್ಲಿಸಿ, ಮೇಕೆ ಮರಿಯನ್ನು ಬಲಿ ಕೊಟ್ಟು ಬಂಡಿ ರಥವನ್ನು ಎಳೆದುಕೊಂಡು ಅಮ್ಮನವರ ಸನ್ನಿಧಾನಕ್ಕೆ ಹೋಗಲಾಯಿತು. ದೇವಸ್ಥಾನದ ಸುತ್ತ ಮೂರು ಸುತ್ತು ಪ್ರದಕ್ಷಣೆ ಮಾಡಿದ ನಂತರ ಸಿಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದಿಂದ ಬಂಡಿ ರಥವು ದೇವಾಲಯದ ಆವರಣಕ್ಕೆ ತಲುಪಿದ ನಂತರ ಭಕ್ತಾದಿಗಳ ಬಾಯಿ ಬೀಗ ತೆಗೆದ ನಂತರ ಸಿಡಿ ಜಾತ್ರೆ ಆರಂಭವಾಯಿತು. ಐಕನಹಳ್ಳಿ ಗ್ರಾಮದ ಭಕ್ತರು ಹಸಿರು ಬಂಡಿಯ ಮೂಲಕ ತಳಿಗೆಯನ್ನು ತಂದು ಅಮ್ಮನವರಿಗೆ ಅರ್ಪಿಸುತ್ತಾರೆ.