• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕೊನೇ ಭಾಗದ ಜಮೀನುಗಳಿಗೆ ನೀರು ಹರಿಸಲು ನಾಲೆಗಳ ಕಾಮಗಾರಿ ಆರಂಭ: ಕೆ.ಎಂ.ಉದಯ್
ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ ಲೋಕಸರ ಭಾಗದ ನಾಲೆಗಳ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ. ಕೃಷಿ ಚಟುವಟಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರದಿಂದ ಸುಮಾರು 22 ಕೋಟಿ ರು. ವೆಚ್ಚದ ಯೋಜನೆಯಡಿ ನಾಲೆ ಕಾಮಗಾರಿ ನಡೆಯುತ್ತಿದೆ.
ಮದ್ದೂರು ತಾಲೂಕಿನಲ್ಲಿ ರಸಗೊಬ್ಬರದ ಕೊರತೆ ಇಲ್ಲ: ವಿ.ಎಸ್.ಅಶೋಕ್
ಮದ್ದೂರು ತಾಲೂಕಿಗೆ 6210 ಮೆಟ್ರಿಕ್ ಟನ್ ಸರಬರಾಜಾಗಿದೆ. ಪ್ರಸ್ತುತ 3181.27 ಮೆಟ್ರಿಕ್ ಟನ್ ದಾಸ್ತಾನಿದೆ. ಹೀಗಾಗಿ ಯಾವುದೇ ರೀತಿಯಲ್ಲಿ ರಸಗೊಬ್ಬರ ಕೊರತೆ ಇಲ್ಲ. ಮಾರಾಟಗಾರರು ಗೊಬ್ಬರದ ಕೃತಕ ಅಭಾವ, ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರ ರೀತ್ಯ ಮೊಕದ್ದಮ್ಮೆ ಹೂಡುವ ಜೊತೆಗೆ ಪರವಾನಗಿ ರದ್ದು ಪಡಿಸಲಾಗುವುದು.
ಮೇಲುಕೋಟೆ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ: ಎಚ್.ಮಂಜುನಾಥ್
ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆ ನಡೆದಾಗ ಇದ್ದಂತಹ ಒಲವು ಬದಲಾಗಿದೆ. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಅನುಪಸ್ಥಿತಿ ಕ್ಷೇತ್ರದ ಜನತೆಗೆ ಕಾಡುತ್ತಿದೆ. ಎಲ್ಲಾ ಸ್ಥಳೀಯ ಸಂಸ್ಥೆ ಹಾಗೂ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದಾರೆ.
ಮಹದೇಶ್ವರಪುರ ಡೇರಿ ಚುನಾವಣೆ: ಜೆಡಿಎಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ
ಮಹದೇಶ್ವರಪುರ ಗ್ರಾಮದ ಡೇರಿಯ 8 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರಾದ ಎಂ.ಆರ್.ದೇವರಾಜ್, ಎಂ.ಎಚ್.ಲಕ್ಷ್ಮೇಗೌಡ, ಎಂ.ಎಸ್.ಜಯರಾಮು, ಎಂ.ಎಸ್.ಕೃಷ್ಣ, ಎಂ.ಎಚ್.ವಿಜಯಕುಮಾರ್, ನಾಗಮ್ಮ, ಚೇತನಕುಮಾರಿ ನಿರ್ದೇಶಕರಾಗಿ ಆಯ್ಕೆಯಾದರು. ಒಂದು ಸ್ಥಾನದಲ್ಲಿ ರೈತಸಂಘ ಬೆಂಬಲಿತ ಅಭ್ಯರ್ಥಿ ಎಂ.ಪಿ.ಕುಮಾರ್ ಆಯ್ಕೆಯಾದರು.
ಕೃಷಿ ಸಂಘದ ಚುನಾವಣೆ: ಎನ್‌ಡಿಎ ಮೈತ್ರಿ ಬೆಂಬಲಿತರಿಗೆ ಹೆಚ್ಚಿನ ಸ್ಥಾನ
ಪಾಂಡವಪುರ ತಾಲೂಕಿನಲ್ಲಿ ಜಕ್ಕನಹಳ್ಳಿ- ನ್ಯಾಮನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 12 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 9 ಸ್ಥಾನ ಎನ್‌ಡಿಎ ಮೈತ್ರಿ ಬೆಂಬಲಿತರು ಹಾಗೂ 2 ರೈತಸಂಘ- ಕಾಂಗ್ರೆಸ್ ಬೆಂಬಲಿತರು ಮತ್ತು ಓರ್ವ ರೈತಸಂಘ ಬಂಡಾಯ ಅಭ್ಯರ್ಥಿ ಆಯ್ಕೆಯಾದರು.
ಹುಡಾ ಅಧ್ಯಕ್ಷ ಸ್ಥಾನ ಮುಸ್ಲಿಮರಿಗೆ ನೀಡುವಂತೆ ಪ್ರತಿಭಟನೆ
ಕಾಂಗ್ರೆಸ್ ಕಾರ್ಯಕರ್ತ ಕಬೀರ್‌ ಅಹಮದ್ ಮಾತನಾಡಿ, ಮುಸ್ಲಿಂ ಸಮುದಾಯವು ರಾಜಕೀಯ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಗಣನೀಯವಾಗಿ ಹಿಂದುಳಿದಿದೆ. ಈ ಸಮುದಾಯವು ಸಮಾಜದ ಮುಖ್ಯವಾಹಿನಿಯಲ್ಲಿ ಸಮಾನ ಭಾಗವಹಿಸಲು ಮತ್ತು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಏಳಿಗೆಯನ್ನು ಸಾಧಿಸಲು ರಾಜಕೀಯ ಅಧಿಕಾರವು ಅತ್ಯಗತ್ಯವಾಗಿದೆ. ಅಧಿಕಾರವಿಲ್ಲದ ಸಮುದಾಯವು ತನ್ನ ಧ್ವನಿಯನ್ನು ಪರಿಣಾಮಕಾರಿಯಾಗಿ ಎತ್ತಲು ಸಾಧ್ಯವಾಗದಿರುವುದರಿಂದ ನಾಯಕತ್ವದ ಕೊರತೆಯಿಂದಾಗಿ ಹಲವು ತೊಡಕುಗಳನ್ನು ಎದುರಿಸುತ್ತಿದೆ. ಈ ಕಾರಣಕ್ಕಾಗಿಯೇ ಅಧಿಕಾರ ವಿಕೇಂದ್ರೀಕರಣ ಮತ್ತು ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದು ಸಮುದಾಯವನ್ನು ಸಬಲಗೊಳಿಸಿ, ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು.
ಪ್ರೊಬೆಷನರಿ ಪಿಎಸ್ಸೈಗಳೊಂದಿಗೆ ಪತ್ರಕರ್ತರ ಸಂವಾದ
ಪೊಲೀಸ್ ಠಾಣೆಗೆ ಯಾವುದಾದರೂ ದೂರು ಬಂದಾಗ ನಮ್ಮ ಮೇಲಿನ ಅಧಿಕಾರಿಗಳು ಯಾವ ರೀತಿ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ, ಯಾವ ರೀತಿ ನ್ಯಾಯ ಕೊಡಿಸುತ್ತಾರೆ? ಬಗ್ಗೆ ನಮಗೆ ಸಹಾಯ ಆಗಲಿ ಎಂದು ಎಲ್ಲವನ್ನು ನಮ್ಮ ಟ್ರೈನಿಂಗ್‌ನಲ್ಲಿ ತಿಳಿಸಿಕೊಡುತ್ತಾರೆ. ಈ ತಿಂಗಳಲ್ಲಿ ನಮಗೆ ಆಗಿರುವ ಅನುಭವ, ಇನ್ನು ಮುಂದೆ ಆರು ತಿಂಗಳ ತರಬೇತಿಯಿದೆ. ಇದರಲ್ಲಿ ವಿವಿಧ ರೀತಿಯ ಕೋರ್ಸ್‌ಗಳು ಇರುತ್ತದೆ. ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಮುಂದೆ ನಮಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಮುಂದಿನ ಆರು ತಿಂಗಳ ಕೋರ್ಸ್‌ನಲ್ಲಿ ನಮ್ಮನ್ನು ನಾವು ಗಟ್ಟಿಗೊಳ್ಳಿಸುವುದಕ್ಕೆ ಪ್ರಯತ್ನ ಆಗಿದೆ ಎಂದು ಹೇಳಿದರು.
ತೆರವು ಕಾರ್ಯಾಚರಣೆ ಖಂಡಿಸಿ ಸಾವಂತನಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಸಾವಂತನಹಳ್ಳಿ ಗ್ರಾಮದ ಸರ್ವೆ ನಂಬರ್ ೯೯ರಲ್ಲಿನ ಗೋಮಾಳದ ಜಮೀನಿನನ್ನು ಸುಮಾರು ೪೦ರಿಂದ ೫೦ ವರ್ಷಗಳಿಗೂ ಮೇಲ್ಪಟ್ಟು ಸಾಗುವಳಿ ಮಾಡುತ್ತಾ ಬರಲಾಗಿದೆ. ಆದರೆ ಈ ಸಂಬಂಧ ಅನುಭೋಗದ ರೀತ್ಯಾ ಗ್ರಾಮಸ್ಥರು ಅಗತ್ಯ ಮಂಜೂರಾತಿ ಮತ್ತು ಖಾತಾ ಆದೇಶಗಳನ್ನು ಹೊಂದಲು ಸಾಧ್ಯವಾಗದ ಕಾರಣ ಗ್ರಾಮಸ್ಥರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕೇಸು ದಾಖಲಿಸಿರುತ್ತಾರೆ. ಈ ನಡುವೆ ಸಾವಂತನ ಹಳ್ಳಿ ಗ್ರಾಮದ ಸರ್ವೆ ನಂಬರ್ ೯೯ರಲ್ಲಿನ ಗೋಮಾಳದ ಜಮೀನನ್ನು ಅನುಭೋಗದಲ್ಲಿ ಇಲ್ಲದ, ಗ್ರಾಮದವರೇ ಅಲ್ಲದ ಇತರೆಯವರಿಗೆ ಮಂಜೂರು ಮಾಡಿರುವುದಾಗಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಅನುಭೋಗದಲ್ಲಿರುವ ಗ್ರಾಮಸ್ಥರಿಗೆ ಅಡ್ಡಿಪಡಿಸಲು ಮುಂದಾಗಿ ಸ್ಥಳದಲ್ಲಿ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.
ಮೂಲ ಸೌಲಭ್ಯಗಳಿದ್ದರೆ ಮಾತ್ರವೇ ಹೊಸ ಬಡಾವಣೆಗಳಿಗೆ ಅನುಮತಿ
ಈ ಹಿಂದೆ ಪಟ್ಟಣದಲ್ಲಿ ಖಾಸಗಿಯವರು ಅಭಿವೃದ್ಧಿಪಡಿಸಿದ ಬಹುತೇಕ ಬಡಾವಣೆಗಳಲ್ಲಿ ಮೂಲಸೌಲಭ್ಯಗಳು ಇನ್ನೂ ಮರೀಚಿಕೆಯಾಗಿವೆ. ಸಮರ್ಪಕ ರಸ್ತೆ, ನೀರು, ಚರಂಡಿ, ತ್ಯಾಜ್ಯ ನಿರ್ವಹಣೆ, ಬೀದಿ ದೀಪ ಮೊದಲಾದವುಗಳನ್ನು ವ್ಯವಸ್ಥಿತವಾಗಿ ಕಲ್ಪಿಸುವ ಕಾರ್ಯ ನಡೆದಿಲ್ಲ. ಪಟ್ಟಣದಲ್ಲಿ ವಸತಿ ಪ್ರದೇಶವು ವಿಸ್ತೀರ್ಣವಾಗಿ ಬೆಳೆಯುತ್ತಿದ್ದು, ಮೂಲಭೂತ ಸೌಕರ್ಯಗಳಿರುವ ಅಧಿಕೃತ ವಸತಿ ಬಡಾವಣೆಗಳಿಗೆ ಮಾತ್ರ ಪುರಸಭೆಯಿಂದ ಅನುಮತಿ ನೀಡಲಾಗುವುದು ಎಂದರು. ಮೂಲ ಸೌಕರ್ಯಗಳನ್ನು ನಿರ್ಮಿಸಿದರೆ ಮಾತ್ರ ಪುರಸಭೆಯಿಂದ ಅನುಮತಿ ನೀಡಲಾಗುವುದೆಂದು ಶಾಸಕ ಸಿ.ಎನ್ ಬಾಲಕೃಷ್ಣ ತಿಳಿಸಿದರು.
ಹಳೇಬೀಡು ಪಟ್ಟಣ ಪಂಚಾಯಿತಿಯಾಗುವ ಎಲ್ಲಾ ಸಾಧ್ಯತೆಗಳಿದೆ
ಜಿಲ್ಲೆಯಲ್ಲಿ ಅತಿ ಹೆಚ್ಚು ಹೊರ ಜಿಲ್ಲೆ, ರಾಜ್ಯಗಳಿಗೆ ತರಕಾರಿಗಳನ್ನ ರಫ್ತು ಮಾಡುತ್ತಿರುವ ಹೋಬಳಿ ಎಂದರೆ ಹಳೇಬೀಡು ಮಾತ್ರ. ಹಾಗಾಗಿ ಈ ಹೋಬಳಿ ಕೇಂದ್ರ ವಾಣಿಜ್ಯವಾಗಿ ವೇಗವಾಗಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಪಟ್ಟಣ ಪಂಚಾಯ್ತಿಯಾಗುವ ಎಲ್ಲಾ ಲಕ್ಷಣಗಳಿವೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರು ತಿಳಿಸಿದ್ದಾರೆ. ಹಳೇಬೀಡು ಪಟ್ಟಣ ಪಂಚಾಯಿತಿಯಾಗುವ ಎಲ್ಲಾ ಸಾಧ್ಯತೆಗಳು ಮುಂಬರುವ ದಿನಗಳಲ್ಲಿ ಸಾಧ್ಯತೆ ಹೆಚ್ಚಾಗಿದೆ. ಹಳೇಬೀಡಿಗೆ ಎಪಿಎಂಸಿ ಅತ್ಯವಶ್ಯಕವಿದ್ದು ಅದನ್ನ ಮುಂದಿನ ದಿನಗಳಲ್ಲಿ ವ್ಯವಸ್ಥೆ ಮಾಡಿಕೊಡಲು ಬದ್ಧನಾಗಿರುತ್ತೇನೆ ಎಂದು ತಿಳಿಸಿದರು.
  • < previous
  • 1
  • ...
  • 271
  • 272
  • 273
  • 274
  • 275
  • 276
  • 277
  • 278
  • 279
  • ...
  • 13105
  • next >
Top Stories
ಗಣೇಶೋತ್ಸವಕ್ಕೆ ಮಾರ್ಗಸೂಚಿ ಬಿಡುಗಡೆ : ಕಟ್ಟುನಿಟ್ಟಾಗಿ ಅನುಕರಿಸಬೇಕು
ಜಾಲತಾಣ ದುರ್ಬಳಕೆ ಮಾಡಿದ್ರೆ ಕ್ರಮ - ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್‌ ಮೇಲೂ ಕೇಸ್‌ : ಸಲೀಂ
ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಮಹಾಮಳೆ ಅಬ್ಬರಕ್ಕೆ ಜನ ತತ್ತರ : 80 ಸಂಪರ್ಕ ಸೇತುವೆ ಜಲಾವೃತ
ಬಡವರ ಜೇಬಿಗೆ ನಮ್ಮ ಸರ್ಕಾರ ₹1 ಲಕ್ಷ ಕೋಟಿ ಹಾಕಿದೆ : ಡಿಕೆಶಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved