ಚಿಲಕಲನೇರ್ಪು ಗುಡ್ಡದಲ್ಲಿ ಅಕ್ರಮ ಮಣ್ಣು ಸಾಗಣೆ ಒಂದು ತಿಂಗಳಿನಿಂದ ಚಿಲಕಲನೇರ್ಪು ಗುಡ್ಡವನ್ನು ಕೊರೆದು ದಾರಿ ನಿರ್ಮಿಸಿ, ಸುಮಾರು ಎರಡು ಎಕರೆ ನೆಲಸಮ ಮಾಡಿ ಭೂಮಿ ಕಬಳಿಕೆ ಮಾಡಿದ್ದಾರೆ. ಆದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಈ ಹಿಂದೆ ಕೂಡ ಚಿಲಕಲನೇರ್ಪು ಗ್ರಾಮದಲ್ಲಿ ನಲ್ಲಗುಟ್ಟ ಗುಡ್ಡವನ್ನು ಹಿಟಾಚಿ ಹಾಗೂ ಟಿಪ್ಪರ್ ಮೂಲಕ ಅಕ್ರಮವಾಗಿ ಮಣ್ಣು ಲೂಟಿ ಮಾಡಿ ಮುಖ್ಯ ರಸ್ತೆಗೆ ಹಾಕಲಾಗುತ್ತಿತ್ತು.