ಕ್ಷಯ ನಿರ್ಮೂಲನೆಗೆ ಲಸಿಕೆ ಅಗತ್ಯಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಕ್ಷಯರೋಗ ನಿರ್ಮೂಲನೆಯಲ್ಲಿ ಲಸಿಕಾಕರಣ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದು, ದುರ್ಬಲ ಜನರಿಗೆ 60 ವರ್ಷ ಮೇಲ್ಪಟ್ಟವರು, ಮಧುಮೇಹದಿಂದ ಬಳಲುತ್ತಿರುವವರು, ಧೂಮಪಾನ ಹಾಗೂ ಮದ್ಯವ್ಯಸನಿಗಳು, ಅಪೌಷ್ಠಿಕತೆಯಿಂದ ಬಳಲುತ್ತಿರುವವರು (18 ಬಿ.ಎಂ.ಐ), ಕ್ಷಯರೋಗಿಗಳ ಸಂಪರ್ಕಿತರು ವಯಸ್ಕರ ಬಿಸಿಜಿ ಲಸಿಕಾಕರಣದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ್ ತಿವಾರಿ ಹೇಳಿದರು.