ಸುರಪುರ: ರಸಗೊಬ್ಬರಕ್ಕಾಗಿ ರೈತರ ಹರಸಾಹಸರಸಗೊಬ್ಬರಕ್ಕಾಗಿ ಅನ್ನದಾತರ ಪರದಾಟ ಇನ್ನೂ ನಿಂತಿಲ್ಲ. ಪ್ರಸಕ್ತ ಸಾಲಿನಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಗಿದ್ದು, ಬಿತ್ತನೆ ಕಾರ್ಯ ಕೂಡ ಪೂರ್ಣಗೊಂಡಿದೆ. ರೈತರು ಒಂದನೇ ಗೊಬ್ಬರ ಹಾಕಿ, ಎರಡನೇ ಗೊಬ್ಬರ ಅಥವಾ ಮೂರನೇ ಗೊಬ್ಬರ ಹಾಕಲು ಸಿದ್ಧತೆಯಲ್ಲಿರುವಾಗಲೇ ಯೂರಿಯಾ ರಸಗೊಬ್ಬರ ಸಿಗದೆ ಅಂಗಡಿ ಮತ್ತು ಕೃಷಿ ಇಲಾಖೆ ಹಾಗೂ ಎಪಿಎಂಸಿಗಳ ಮುಂದೆ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ. ಅಂಗಡಿಗಳೆದುರು ಕಿಕ್ಕಿರಿದು ನಿಂತ ರೈತಸಮೂಹ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಈ ವೇಳೆ ರೈತರೊಬ್ಬರಿಗೆ ಪೊಲೀಸ್ ಬೀಸಿದ ಲಾಠಿ ಕೆಲಕಾಲ ಅನ್ನದಾತ ಆಕ್ರೋಶಕ್ಕೆ ಕಾರಣವಾಗಿತ್ತು.