ಗಾಂಧಿ ಕುಟುಂಬದ ಯಾರಿಂದಲೂ ಆರ್‌ಎಸ್‌ಎಸ್ ನಿಷೇಧಿಸಲಾಗಿಲ್ಲಇಂದಿರಾ ಗಾಂಧಿ, ರಾಜೀವ್ ಗಾಂಧಿ, ಜವಹಾರ್ ಲಾಲ್ ನೆಹರು ಯಾರಿಗೂ ಆರ್‌ಎಸ್‌ಎಸ್ ನಿಷೇಧಿಸಲು ಸಾಧ್ಯವಾಗಲಿಲ್ಲ. ಕೆಲವರು ತೀರಿಯೇ ಹೋದರು, ಕೆಲವರು ನಾಶವಾದರು. ಈಗಲೂ ಇದೇ ದಾರಿಯಲ್ಲಿ ಕೆಲವರು ನಡೆಯುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಕೆ. ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದರು. ಸರ್ಕಾರದಲ್ಲಿ ನಡೆಯಲಿರುವ ಸಚಿವ ಸಂಪುಟ ಪುನರ್‌ರಚನೆ ಕುರಿತಂತೆ ಅವರು ತೀವ್ರವಾಗಿ ಟೀಕಿಸಿದರು. ಕೆಲವರು ತಮ್ಮ ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಮಾಡುತ್ತಿರುವ ರಾಜಕಾರಣದಿಂದ ಸರ್ಕಾರವೇ ಉಳಿಯಲಾರದು ಎಂಬ ನಂಬಿಕೆ ನನಗಿದೆ ಎಂದು ಅವರು ಸ್ಪಷ್ಟವಾಗಿ ಹೇಳಿದರು.