ಒಂದೇ ಮಳೆಗೆ ಬಾಯ್ಬಿಟ್ಟ ಮಂಡ್ಯ ನಗರದ ರಸ್ತೆ ಗುಂಡಿಗಳು..!ಶನಿವಾರ ರಾತ್ರಿ ಸುರಿದ ಒಂದೇ ಮಳೆಗೆ ನಗರದ ಹಲವೆಡೆ ರಸ್ತೆಗಳು ಗುಂಡಿಬಿದ್ದಿವೆ. ಗುಂಡಿಗಳಿಗೆ ಹಾಕಿದ ತೇಪೆಗಳು ಹರಿದು ಹೋಗಿವೆ. ತೇಪೆ ಹಾಕಿದ ರಸ್ತೆಗಳೆಲ್ಲವೂ ಮತ್ತೆ ಹಿಂದಿನ ಸ್ಥಿತಿಯನ್ನೇ ತಲುಪಿ ಅವಾಂತರ ಸೃಷ್ಟಿಸಿವೆ. ಮಂಡ್ಯ ನಗರದ ಹೊಳಲು ವೃತ್ತ, ರೈಲ್ವೆ ಕೆಳಸೇತುವೆ, ಕೊಪ್ಪ ಕಡೆಗೆ ತೆರಳುವ ನಿಲ್ದಾಣ, ಕುವೆಂಪು ನಗರ, ಚಾಮುಂಡೇಶ್ವರಿ ನಗರ, ಜಿಲ್ಲಾಸ್ಪತ್ರೆ ಹಿಂಭಾಗದ ರಸ್ತೆ, ಸೇರಿದಂತೆ ಹಲವೆಡೆ ರಸ್ತೆಗಳು ಕಿತ್ತುಬಂದಿವೆ.