ಜಿಲ್ಲೆಯಾದ್ಯಂತ ಮತ್ತೆ ಅಬ್ಬರಿಸಿದ ಮಳೆಅಕಾಲಿಕ ಮಳೆಗೆ ಹಲವು ಗ್ರಾಮಗಳಲ್ಲಿನ ಕೆರೆಗಳ ಕೋಡಿ ಒಡೆದು ಕೃಷಿ ಜಮೀನು ಜಲಾವೃತಗೊಂಡಿದೆ. ಕೆಲವು ಗ್ರಾಮಗಳ ಸಂಪರ್ಕ ಕೂಡ ಕಡಿತಗೊಂಡಿದೆ. ಮನೆಗಳಿಗೂ ಕೂಡ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಈಗಾಗಲೇ ಕಟಾವಿಗೆ ಬಂದಿರುವ ಮೆಕ್ಕೆಜೋಳ ಬೆಳೆ ಹಾಗೂ ಕಟಾವು ಮಾಡಿರುವ ಜೋಳದ ಅವಕ ಮಳೆ ನೀರಿಗೆ ಆಹುತಿಯಾಗಿ ರೈತರ ಕಣ್ಣಲ್ಲಿನೀರು ತರಿಸಿದೆ. ಅಲ್ಲದೆ ಈಗಾಗಲೇ ಕೈಗೊಂಡಿರುವ ಕೆರೆ ಅಚ್ಚುಕಟ್ಟು ಪ್ರದೇಶದ ಭತ್ತ ಬೆಳೆ ಕೂಡ ಜಲಾವೃತಗೊಂಡಿರುವುದು ಕಂಡುಬಂದಿದೆ. ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿನ ಫಸಲಿಗೆ ಬಂದಿರುವ ಅಡಿಕೆ, ಬಾಳೆ, ತೆಂಗು, ತರಕಾರಿ ಬೆಳೆಗಳು ಹಾಗೂ ಹೂ ತೋಟಗಾರಿಕೆ ಬೆಳೆಗಳ ಪ್ರದೇಶಕ್ಕೆ ನೀರು ನುಗ್ಗಿದೆ.