ಮಾನವ ಕಳ್ಳ ಸಾಗಾಣಿಕೆ ತಡೆಗೆ ಕೈ ಜೋಡಿಸಿ: ನ್ಯಾಯಾಧೀಶ ಸುಧೀರ್ಮಾನವ ಕಳ್ಳ ಸಾಗಾಣಿಕೆ ವಿಶ್ವಾದ್ಯಂತ ವ್ಯಾಪಿಸಿದ್ದು, ಮಕ್ಕಳು, ಹೆಂಗಸರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಯಸ್ಸಿನ ಮಾನವ ಜೀವಿಗಳನ್ನು ಅಪಹರಣ ಮಾಡಿ ತಮ್ಮ ಸ್ವೇಚ್ಛಾಚಾರ, ಸಮಾಜಘಾತುಕ ಕೃತ್ಯಗಳು ಹಾಗೂ ಭಿಕ್ಷಾಟನೆ ಸೇರಿ ಕಾನೂನು ಬಾಹಿರ ಕೃತ್ಯಗಳಿಗೆ ಬಳಸಿಕೊಳ್ಳುವ ಜಾಲವು ಪ್ರಪಂಚದಲ್ಲಿ ಸದ್ದಿಲ್ಲದೇ ಕೆಲಸ ಮಾಡುತ್ತಿದೆ.