ಡಾ.ಭೈರಪ್ಪ ಸಾಹಿತ್ಯ, ಆಳವಾದ ಜ್ಞಾನ ಮಹತ್ವದ್ದು :ಸ.ಗಿರಿಜಾಶಂಕರಚಿಕ್ಕಮಗಳೂರುಧರ್ಮ, ಅರ್ಥ, ಕಾಮ, ಮೋಕ್ಷ ಈ ಚತುರ್ವಿಧ ಪುರುಷಾರ್ಥಗಳ ಕಲ್ಪನೆಯಿಂದಲೇ ನನ್ನ ಕೃತಿಗಳಲ್ಲಿ ಪಾತ್ರಗಳು ಸೃಷ್ಟಿ ಯಾಗುತ್ತವೆ ಎನ್ನುತ್ತಿದ್ದ ಡಾ.ಎಸ್.ಎಲ್.ಭೈರಪ್ಪ ಅವರಲ್ಲಿದ್ದ ಸಾಹಿತ್ಯ, ತತ್ತ್ವ ಸಿದ್ಧಾಂತದ ಆಳವಾದ ಜ್ಞಾನ ಮಹತ್ವದ್ದು. ಬದುಕಿನ ವಿಶಾಲ ಅರ್ಥ ನೀಡುವ ಸಂಪುಟದೊಂದಿಗೆ ಮಾತನಾಡಿದ ಅನುಭವ ಅವರ ಒಡನಾಟದಲ್ಲಿ ಆಗುತ್ತಿತ್ತು ಎಂದು ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಹೇಳಿದರು.