ನರಗುಂದದಲ್ಲಿ ಹೆಣ್ಣು ಮಕ್ಕಳ ರಾಖಿ ಖರೀದಿ ಜೋರುಸಹೋದರತ್ವದ ಸಂಕೇತವಾದ ರಕ್ಷಾ ಬಂಧನ ಹುಣ್ಣಿಮೆ ಇನ್ನೊಂದು ದಿನ ಬಾಕಿ ಇರುವಂತೆಯೇ ನರಗುಂದ, ಕೊಣ್ಣೂರ, ಶಿರೋಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರಾಖಿ (ನೂಲು ) ಖರೀದಿ ಜೋರು ಪಡೆದಿದೆ. ಮಹಿಳೆಯರು, ಯುವತಿಯರು ಮಾರುಕಟ್ಟೆಯಲ್ಲಿ ದಿನವಿಡೀ ಖರೀದಿಗೆ ಮುಗಿ ಬೀಳುತ್ತಿದ್ದಾರೆ.