ಗಂಟೆಗೊಂದು ಸೂಚನೆ: ದಾವಣಗೆರೆಯಲ್ಲಿ ಸಿಡಿದೆದ್ದ ಗಣತಿ ಸಿಬ್ಬಂದಿ!ಜಾತಿ ಜನಗಣತಿ ಮಾಡಿ ಮುಗಿಸಿ ಬಂದಿದ್ದರೂ, ಪಡಿತರ ಚೀಟಿಯಲ್ಲಿ ಇಲ್ಲದ ಹಾಗೂ ಆಧಾರ್ ಕಾರ್ಡ್ ಕೊಡಲಿಚ್ಛಿಸದ ಕುಟುಂಬ ಸದಸ್ಯರನ್ನು ಹೊಸದಾಗಿ ಯುಎಚ್ ಐಡಿ ಕ್ರಿಯೇಟ್ ಮಾಡಿಕೊಂಡು, ಗಣತಿ ಮಾಡಬೇಕೆಂಬ ಮೇಲಾಧಿಕಾರಿಗಳ ಸೂಚನೆಗೆ ರೋಸಿಹೋದ ಸೂಪರ್ ವೈಸರ್‌ಗಳು, ಗಣತಿದಾರರು ತಹಸೀಲ್ದಾರ್ ಅಶ್ವತ್ಥ, ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಮುತ್ತಿಗೆ ಹಾಕಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರ ಪಾಲಿಕೆ ಆವರಣದಲ್ಲಿ ಗುರುವಾರ ನಡೆಯಿತು.