ಲಕ್ಷ್ಮೇಶ್ವರದಲ್ಲಿ ಯೂರಿಯಾ ಸರತಿ ಸಾಲಿನಲ್ಲಿ ಕೈಚೀಲ, ಚಪ್ಪಲಿಕಳೆದ ಒಂದು ತಿಂಗಳಿಂದ ಯೂರಿಯಾ ಗೊಬ್ಬರಕ್ಕಾಗಿ ಹಗಲು ರಾತ್ರಿಯನ್ನದೇ ಕಾಯುತ್ತಿದ್ದರೂ ರೈತರಿಗೆ ಬೇಕಾದ ಪ್ರಮಾಣದಲ್ಲಿ ಯೂರಿಯಾ ಸಿಗುತ್ತಿಲ್ಲ. ಸರತಿ ಸಾಲಿನಲ್ಲಿ ನಿಂತು ನಿಂತು ಸಾಕಾದ ರೈತರು ಇದೀಗ ಆ ಸರದಿ ಸಾಲಿನಲ್ಲಿ ತಮ್ಮ ಕೈಚೀಲ, ಚಪ್ಪಲಿಗಳನ್ನು ಇಟ್ಟು ಗೊಬ್ಬರಕ್ಕಾಗಿ ಎದುರು ನೋಡುತ್ತಿದ್ದಾರೆ.