11ರಂದು ಬಂಜಾರ ಜನಪ್ರತಿನಿಧಿಗಳಿಗೆ ಸನ್ಮಾನ, ಮಾಹಿತಿ ವಿನಿಮಯ ಕಾರ್ಯಕ್ರಮತಾಲೂಕಿನ ಬಂಜಾರ (ಲಮಾಣಿ) ಸಮಾಜದ ನಾಯಕರು, ಡಾವ್‌ಗಳು, ಕಾರಬಾರಿಗಳು, ಸಂಘದ ಮಾಜಿ ಅಧ್ಯಕ್ಷರು, ಹೊನ್ನಾಳಿ ವಿಭಾನಸಭಾ ವ್ಯಾಪ್ತಿಯ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಸನ್ಮಾನ ಸಮಾರಂಭ ಜೊತೆಗೆ ಸಮಾಜದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಗಳ ಕುರಿತು ಮಾಹಿತಿ ವಿನಿಯಮ ಕಾರ್ಯಕ್ರಮವನ್ನು ಅ.11ರಂದು ಹಿರೇಕಲ್ಮಠದ ಜಗದ್ಗುರು ಪಂಚಾಚಾರ್ಯ ಸಮುದಾಯ ಭವನದಲ್ಲಿ ಬೆಳಗ್ಗೆ 11.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಬಂಜಾರ (ಲಮಾಣಿ) ಸೇವಾ ಸಂಘ ಅಧ್ಯಕ್ಷ ರವಿ ನಾಯ್ಕ ಹೊನ್ನಾಳಿಯಲ್ಲಿ ಹೇಳಿದ್ದಾರೆ.