ಮಹಿಳೆಯನ್ನ ಕೀಳಾಗಿ ಬಿಂಬಿಸಿದ ವೈದಿಕ ಗ್ರಂಥ ಸುಡಬೇಕು: ಆರ್.ಬಿ. ತಿಮ್ಮಾಪೂರಮನುವಾದಿಗಳು ಹೆಣ್ಣು ಮಕ್ಕಳಿಗೆ ಬಹಳ ಶೋಷಣೆ ಮಾಡಿದ್ದಾರೆ, ಕೆಲವು ವೈದಿಕ ಗ್ರಂಥಗಳಲ್ಲಿ ಮಹಿಳೆ ಬಗ್ಗೆ ಕೀಳಾಗಿ ಬಿಂಬಿಸಲಾಗಿದೆ. ಇಂಥ ಗ್ರಂಥಗಳನ್ನು ಸುಟ್ಟು ಹಾಕಬೇಕು, ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ಧರ್ಮ ಬೇಕು, ಎಲ್ಲರನ್ನು ಸಮಾನವಾಗಿ ಕಾಣುವ ಸಮಾಜ ಬೇಕು, ಅಂದಾಗ ಮಾತ್ರ ದೇಶ ಮುಂದುವರೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.