ಕೇಂದ್ರದ ಧೋರಣೆಗೆ ಗೊಬ್ಬರ ಕೊರತೆ: ಚೆಲುವಕೇಂದ್ರ ಸರ್ಕಾರವು ಯೂರಿಯಾ ಪೂರೈಕೆಯಲ್ಲೂ ರಾಜ್ಯದ ಮೇಲಿನ ಮಲತಾಯಿ ಧೋರಣೆ ತೋರಿದ್ದು, ಬೇಡಿಕೆಯಷ್ಟು ರಸಗೊಬ್ಬರ ಸರಬರಾಜು ಮಾಡದ ಕಾರಣದಿಂದ ಸಮಸ್ಯೆ ಸೃಷ್ಟಿಯಾಗಿದೆ. ಆದರೆ, ಬಿಜೆಪಿ ನಾಯಕರು ರೈತರ ವಿಚಾರದಲ್ಲೂ ರಾಜಕೀಯ ಮಾಡಿ ಆಟ ಆಡಲು ನೋಡುತ್ತಿದ್ದು, ಅದನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ.