ಹಿಂದೂ ಧರ್ಮ ಉಳಿವಿಗೆ ಅವತರಿಸಿದವರು ಶಂಕರಾಚಾರ್ಯರು: ಕೆ.ಬಿ.ವೆಂಕಟೇಶ್ಶಂಕರಾಚಾರ್ಯರು ಭರತಖಂಡದ ನಾಲ್ಕು ದಿಕ್ಕುಗಳಲ್ಲಿ ಶಕ್ತಿಪೀಠ, ಮಠಗಳನ್ನು ಸ್ಥಾಪಿಸಿದರು. ಇವರ ರಚನೆಯಹ್ಮಸೂತ್ರದ ಭಾಷ್ಯ, ಉಪನಿಷತ್ ಭಾಷ್ಯ ಭಜಗೋವಿಂದಂ, ಸೌಂದರ್ಯ ಲಹರಿ ಸ್ತ್ರೋತ್ರಗಳು ಜಗತ್ಪ್ರಸಿದ್ಧವಾಗಿದೆ. ಬದುಕಿದ್ದು ಅತ್ಯಲ್ಪವಾದರೂ ಸಾಧನೆ ಅಗಾಧವಾಗಿದೆ. ವೇದ, ಶಾಸ್ತ್ರಗಳಲ್ಲಿ ಅಖಂಡ ಪಾಂಡಿತ್ಯ ಪಡೆದು, ವೇದ, ಪೌರೋಹಿತ್ಯ ಎಲ್ಲ ವರ್ಣಕ್ಕೆ ಸೇರಿದೆ.