ಕಚೇರಿ, ಕಾರ್ಖಾನೆಗಳಲ್ಲಿ ಆಯುಧ ಪೂಜೆ ಜೋರುಬುಧವಾರ ಮತ್ತು ಗುರುವಾರ ರಜೆ ಹಿನ್ನೆಲೆಯಲ್ಲಿ ಮಂಗಳವಾರವೇ ಸರ್ಕಾರಿ ಕಚೇರಿಗಳು, ಕಾರ್ಖಾನೆಗಳಲ್ಲಿ ಪೂಜೆ ಕೈಗೊಳ್ಳಲಾಯಿತು. ವಿಧಾನ ಸೌಧ, ವಿಕಾಸಸೌಧದ ಸಚಿವರ ಕಚೇರಿಗಳನ್ನು ಹೂವು, ತಳಿರು ತೋರಣ, ರಂಗೋಲಿಗಳಿಂದ ಸಿಂಗರಿಸಲಾಗಿತ್ತು. ಪೂಜೆ ನೆರವೇರಿಸಿ ಬಳಿಕ ಸಿಬ್ಬಂದಿಗೆ ಸಿಹಿ ವಿತರಿಸಲಾಯಿತು.