ಕನ್ನಡ ಉಳಿಸುವುದು ಬೇಡ ಬಳಸಿದರೆ ಸಾಕುಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಗರದ ಬಿ.ಕಾಟೀಹಳ್ಳಿಯ ಸಂತ ಜೋಸೆಫರ ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಲೋಯೋಲಾ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಕನ್ನಡ ನಾಡು-ನುಡಿ ಸಾವಿರಾರು ವರ್ಷಗಳ ದೀರ್ಘ ಇತಿಹಾಸ ಮತ್ತು ಪರಂಪರೆಯನ್ನು ಒಳಗೊಂಡು ಶ್ರೀಮಂತವಾಗಿದೆ, ಇಂತಹ ಭಾಷೆಯನ್ನು ಉಳಿಸಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗನಾದ್ದಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಇತರ ಭಾಷೆಗಳನ್ನು ಕಲಿಯುವ ಅಗತ್ಯತೆ, ಅನಿವಾರ್ಯತೆ ಇದೆ ನಿಜ, ಆದರೆ ನಮ್ಮ ಭಾಷೆಯನ್ನು ಬಳಸಿಕೊಂಡು ಹೋದರೆ ಸಾಕು ನಮ್ಮ ಹೃದಯದ ಭಾಷೆ,ಮಾತೃ ಭಾಷೆ ಕನ್ನಡ ಚಿರಸ್ಥಾಯಿಯಾಗಲಿದೆ ಎಂದರು.