ಶ್ರೀ ಕೊಲ್ಲಾಪುರದಮ್ಮ ಜಾತ್ರೆಯಲ್ಲಿ ಕೆಂಡೋತ್ಸವಶ್ರೀ ಕೊಲ್ಲಾಪುರದಮ್ಮ ದೇವಸ್ಥಾನ ಸೇವಾ ಸಮಿತಿ ಮತ್ತು ಡಾ.ಬಿ. ಆರ್. ಅಂಬೇಡ್ಕರ್ ಯುವಕ ಸಂಘ ಪೆನ್‌ಷನ್‌ಮೊಹಲ್ಲಾ ಮತ್ತು ರಾಜ್‌ಕುಮಾರ್ ನಗರ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಅಮ್ಮನವರ ಜಾತ್ರೋತ್ಸವ ಅಂಗವಾಗಿ ಶ್ರದ್ಧ ಭಕ್ತಿಯಿಂದ ಕೆಂಡೋತ್ಸವವು ಜರುಗಿತು. ಶ್ರೀ ಅಮ್ಮನವರ ಜಾತ್ರೋತ್ಸವ ಮತ್ತು ಮಹಾಮಂಗಾಳಾರತಿ ನಡೆಯಿತು. ನಂತರ ದೇವರ ಅಡ್ಡೆಯ ಮೆರವಣಿಗೆ ಹೊಸಲೈನ್ ರಸ್ತೆ, ಮಾರ್ಗವಾಗಿ ಗಾಣಿಗರ ಬೀದಿ, ಡಿ. ಆರ್. ಪೋಲೀಸ್ ಕ್ವಾಟ್ರಸ್, ನಿರ್ಮಲ ನಗರ, ಬೆಸ್ತರ ಬೀದಿ ಮತ್ತು ದುರ್ಗಮ್ಮ ದೇವಸ್ಥಾನದ ಸುತ್ತಮುತ್ತ ಅಡ್ಡೆಯು ಮೆರವಣಿಗೆ ಸಾಗಿತು.