ರೈತರ ಶ್ರಮಕ್ಕೆ ತಕ್ಕ ಪ್ರತಿಫಲ, ಲಾಭ ಸಿಗುತ್ತಿಲ್ಲ: ಎ.ಎಲ್.ಕೆಂಪೂಗೌಡಜಿಲ್ಲೆಯಲ್ಲಿ ಕೆಆರ್‌ಎಸ್ ಅಣೆಕಟ್ಟಿನ ನಿರ್ಮಾಣದ ನಂತರ ಕಬ್ಬು ಬೆಳೆಯಲ್ಲಿ ಮಂಡ್ಯ ಜಿಲ್ಲೆ ಒಂದು ಹೊಸ ಆಯಾಮವನ್ನು ಸೃಷ್ಟಿಸಿದೆ ಎಂದರೆ ತಪ್ಪಾಗುವುದಿಲ್ಲ. ಮೈಷುಗರ್ ಕಾರ್ಖಾನೆ ನಿರ್ಮಾಣವಾದ ಬಳಿಕ ಅನೇಕ ಉಪ ಕಾರ್ಖಾನೆಗಳು ಪ್ರಾರಂಭವಾದವು. ಪ್ರಸ್ತುತ ರೈತ ಕಬ್ಬನ್ನು ಬೆಳೆಯ ಬೇಕೆಂದರೆ 1500 ರು. ವೆಚ್ಚವಾಗುತ್ತದೆ. ರೈತರ ವೆಚ್ಚಕ್ಕೆ ತಕ್ಕಂತಹ ಪ್ರತಿಫಲ, ಲಾಭ ದೊರೆಯುತ್ತಿಲ್ಲ.