ಗಣಿಗಾರಿಕೆ: ದೂರಿನ ಮೇರೆಗೆ ಅಧಿಕಾರಿಗಳ ಭೇಟಿ, ಪರಿಶೀಲನೆಗಣಿಗಾರಿಕೆಗಾಗಿ ಗ್ರಾಮದ ಸರ್ಕಾರಿ ರಸ್ತೆ ಹಾಗೂ ಸರ್ಕಾರಿ ಕೆರೆಯನ್ನು ಮುಚ್ಚಿದ್ದರು ಜೊತೆಗೆ ರಾತ್ರಿ ಹತ್ತು ಗಂಟೆಯವರೆಗೂ ಕಲ್ಲು ಗಣಿ ಸ್ಫೋಟ ಮಾಡುತ್ತಿದ್ದರು. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮನೆಯಲ್ಲಿ ವಾಸಿಸಲು ತೊಂದರೆಯುಂಟಾಗುತ್ತಿದೆ, ರಾಮನಗರ ಜಿಲ್ಲೆ ಭೂ ದಾಖಲೆಗಳ ಉಪನಿರ್ದೇಶಕರ ಆದೇಶದ ಮೇರೆಗೆ ಕೆರೆ ಸರ್ವೇ ನಡೆಸಿದಾಗ ಕೆರೆ ಜಾಗ ಒತ್ತುವರಿಯಾಗಿರುವುದು ಬೆಳಕಿಗೆ ಬಂದಿರುತ್ತದೆ.