ವಿಶೇಷಚೇತನರ ಸ್ವಾಭಿಮಾನದ ಬದುಕಿಗಾಗಿ ಸರ್ಕಾರದ ಸವಲತ್ತು ಅಗತ್ಯ: ಶಾಸಕ ಇಕ್ಬಾಲ್ ಹುಸೇನ್ಜಿಲ್ಲೆಯಲ್ಲಿ 19,183 ವಿಕಲಚೇತನರಿದ್ದು, ಅವರಲ್ಲಿ 16,644 ಫಲಾನುಭವಿಗಳಿಗೆ ಮಾಸಿಕ ಪಿಂಚಣಿ ಸಿಗುತ್ತಿದೆ. 15,012 ಯುಡಿಐಡಿ ಕಾರ್ಡ್ ವಿತರಣೆ ಆಗಿದೆ. ಮಾಸಿಕ ಪೋಷಣಾ ಭತ್ಯೆ, ಸಾರಿಗೆ ಇಲಾಖೆಯ ಮುಖಾಂತರ ರಿಯಾಯಿತಿ ದರದಲ್ಲಿ ಬಸ್‌ಪಾಸ್ ಸೌಲಭ್ಯ, ಶೇ. 5ರ ಮೀಸಲಾತಿ ಅನುದಾನ ಬಳಕೆ ಹಾಗೂ ವಿವಿಧ ಇಲಾಖೆಗಳ ಮೂಲಕ ಯೋಜನೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ತಲುಪಿಸುವಲ್ಲಿ ಇಲಾಖೆ ಶ್ರಮಿಸುತ್ತಿದೆ .