ಪ್ರತ್ಯೇಕ ಪ್ರಕರಣಗಳಲ್ಲಿ ಕುಖ್ಯಾತ ಸುಲಿಗೆಕೋರರ ಬಂಧನಮನೆ ಕಳ್ಳತನ ಮಾಡುತ್ತಿದ್ದವನನ್ನು ಬಂಧಿಸಿ ಒಂದು ದ್ವಿಚಕ್ರ ವಾಹನ ಸೇರಿ ಸುಮಾರು ೬.೫ ಲಕ್ಷ ರು. ಮೌಲ್ಯದ ೮೦ ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ರಾಮನಗರ ಗ್ರಾಮಾಂತರ ಪೊಲೀಸರು ಸಫಲರಾಗಿದ್ದಾರೆ. ಬೆಂಗಳೂರಿನ ಹಳೇಗುಡದಹಳ್ಳಿಯ ನಾಗರಾಜ @ ಡೈಮಂಡ್ ನಾಗ (೩೨) ಬಂಧಿತ. ನಾಗರಾಜ ಸುಮಾರು ೧೯ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಯೇ ಇವನ ಮೇಲೆ ೪ ಪ್ರಕರಣಗಳು ದಾಖಲಾಗಿದ್ದವು.