ಸುಡುವ ದಾರಿಯಲ್ಲಿ ಕಾಡುವ ನಿಜ ಬದುಕಿನ ಪಾತ್ರಗಳುಉತ್ಸವ್ ಗೊನವಾರ ನಿರ್ದೇಶನದ ಫೋಟೋ ಸಿನಿಮಾ ಒಂದೆರಡು ಪಾತ್ರಗಳ ಮೂಲಕ ಇಡೀ ದೇಶದ ಕತೆಯನ್ನು ತುಂಬಾ ಆಪ್ತವಾಗಿ ಹೇಳುತ್ತದೆ. ಸಿನಿಮಾ ನೋಡಿದ ಮೇಲೆ ಮಾತಿಗಿಂತ ಹೆಚ್ಚಾಗಿ ಮೌನವೇ ಆವರಿಸಿಕೊಳ್ಳುತ್ತದೆ. ಅತ್ಯಂತ ಸಹಜತೆಯಿಂದ ಕೂಡ ಈ ಚಿತ್ರ, ಲಾಕ್ಡೌನ್ ಸಮಯದಲ್ಲಿ ನೋವುಂಡ ಪ್ರತಿಯೊಬ್ಬರ ಕತೆಯಾಗುತ್ತದೆ.