ಕಾಡಾನೆ ದಾಳಿ: ಕುರಿಗಾಹಿ ಬಲಿಕನಕಪುರ: ಕಾಡಾನೆ ದಾಳಿಗೆ ಕುರಿಗಾಹಿ ಬಲಿಯಾಗಿರುವ ಘಟನೆ ತಾಲೂಕಿನ ಹೊನ್ನಿಗನಹಳ್ಳಿಯಲ್ಲಿ ನಡೆದಿದೆ.ತಾಲೂಕಿನ ಹೊನ್ನಿಗನಹಳ್ಳಿಯ ಮರಿಗೌಡ (76) ಕಾಡಾನೆ ದಾಳಿಗೆ ಮೃತಪಟ್ಟ ದುರ್ದೈವಿ. ಗ್ರಾಮದ ಹೊರವಲಯದಲ್ಲಿ ಮರಿಗೌಡ ಮತ್ತು ಗ್ರಾಮದ ಮತ್ತಿಬ್ಬರು ಎಂದಿನಂತೆ ಕುರಿ ಮೇಯಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.