ವಾಸ ಪಟ್ಟಣದಲ್ಲಿ ಕೋತಿಗಳ ಮಾರಣ ಹೋಮಹಾರೋಹಳ್ಳಿ: ತೆಂಗಿನ ಫಸಲು ನಾಶ ಮಾಡುತ್ತವೆ ಎಂಬ ಕಾರಣಕ್ಕೆ ಏಳು ಕೋತಿಗಳನ್ನು ಕೊಂದು ಚೀಲದಲ್ಲಿ ಕಟ್ಟಿ ಬಿಸಾಡಿರುವ ಅಮಾನವೀಯ ಘಟನೆ ತಾಲೂಕಿನ ಯಲಚವಾಡಿ ಬಳಿಯ ವಾಸ ಪಟ್ಟಣದಲ್ಲಿ ನಡೆದಿದೆ. ಕೋತಿಗಳು ಸಾಮಾನ್ಯವಾಗಿ ತೆಂಗಿನ ಮರದಲ್ಲಿ ಎಳನೀರು, ಸೀಬೆಕಾಯಿ, ಕಡಲೆಕಾಯಿ ಇತ್ಯಾದಿ ಕೃಷಿ ಬೆಳೆಗಳ ಮೇಲು ದಾಳಿ ಮಾಡುತ್ತವೆ. ಇದೇ ಕಾರಣಕ್ಕೆ ಕೋತಿಗಳ ಉಪಟಳದಿಂದ ಬೇಸತ್ತ ಕಿಡಿಗೇಡಿಗಳು ಕೋತಿ ಮರಿಗಳನ್ನ ಸಾಯಿಸಿ ತಂದು ಹಾಕಿದ್ದಾರೆ.