ಕುದೂರಿನಲ್ಲಿ ಮರೆಯಾಗುತ್ತಿರುವ ಕೈ ಮಗ್ಗಗಳು!ಕುದೂರು: ರಾಮನಗರ ಜಿಲ್ಲೆಯಲ್ಲಿ ಮಾಗಡಿ ತಾಲೂಕು ಕುದೂರು ಪಟ್ಟಣವನ್ನು ರೇಷ್ಮೆ ಸೀರೆ ನೇಯುವ ಪಟ್ಟಣ ಎಂದೇ ಕರೆಯುತ್ತಾರೆ. ಇರುವ ಆರೇಳು ಸಾವಿರ ಮನೆಗಳಲ್ಲಿ ಒಂದು ಸಾವಿರ ಮಗ್ಗದ ಮನೆಗಳೇ ಇವೆ. ಎಲ್ಲಿ ನೋಡಿದರೂ ಮಗ್ಗದ ಲಾಳಿಯ ಲಟಪಟ ಲಟಪಟ ಶಬ್ಧವೇ ತುಂಬಿರುತ್ತಿತ್ತು. ಇಲ್ಲಿ ನೇಕಾರಿಕೆ ಮಾಡಲು ದೂರದ ದೊಡ್ಡಬಳ್ಳಾಪುರ, ಬೆಂಗಳೂರು, ನೆಲಮಂಗಲ, ತಿಪಟೂರು ಕಡೆಗಳಿಂದ ನೌಕರರು ಕೆಲಸವನ್ನರಸಿ ಕುದೂರು ಗ್ರಾಮಕ್ಕೆ ಬರುತ್ತಿದ್ದರು.