ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ: ಕೆ.ಜೆ. ಅರ್ಪಿತಾಹೊಗೆ ರಹಿತ ಹಾಗೂ ಹೊಗೆ ಸಹಿತ ತಂಬಾಕು ಉತ್ಪನ್ನಗಳು ಮಾದಕ ವಸ್ತುಗಳ ಪಟ್ಟಿಗೆ ಸೇರಿವೆ, ಅವುಗಳಲ್ಲಿ ಹೊಗೆ ಬಿಡುವ ಸಿಗರೇಟ್ನಲ್ಲಿಯೇ 4000 ಕ್ಕೂ ಹೆಚ್ಚಿನ ರಸಾಯನಿಕ ಅಂಶಗಳಿದ್ದು, ಅವುಗಳಲ್ಲಿ 200 ವಿಷಕಾರಿ ಹಾಗೂ 60 ಕ್ಯಾನ್ಸರ್ ಉಂಟುಮಾಡುವ ರಸಾಯನಿಕಗಳಾಗಿವೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಜೆ. ಅರ್ಪಿತಾ ಹೇಳಿದರು.