ಶಿವಗಂಗೆಯಲ್ಲಿ ಮಹಾಶಿವರಾತ್ರಿ ಆಚರಣೆಶಿವನ ಲಿಂಗಕ್ಕೆ ಪಂಚಾಮೃತ ಅಭಿಷೇಕ, ಬಿಲ್ವಷ್ಟೋತ್ತರ, ಗಣಪತಿ ಪೂಜೆ, ಕುಂಕುಮಾರ್ಚನೆ ಮುಂತಾದ ಧಾರ್ಮಿಕ ಕೈಂಕರ್ಯಗಳನ್ನು ಅರ್ಚಕರಾದ ರಾಜುದೀಕ್ಷಿತ್ ನಡೆಸಿಕೊಟ್ಟರು. ದೇವಾಲಯವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಸೇಬು, ದ್ರಾಕ್ಷಿ ಸೇರಿ ವಿವಿಧ ಹಣ್ಣುಗಳ ಅಲಂಕಾರ, ಬಿಲ್ವಪತ್ರೆ, ಅಲಂಕಾರಿಕ ಹೂಗಳಿಂದ ದೇವಾಲಯದ ಪ್ರಾಂಗಣ ಕಂಗೊಳಿಸುತ್ತಿತ್ತು.