ಶಿಕ್ಷಣದಲ್ಲಿ ಕನ್ನಡ ಮರೆತರೆ ಮಕ್ಕಳು, ಯುವಜನರ ಕ್ರಿಯಾಶೀಲತೆ ನಾಶಕನ್ನಡ ನಾಡಲ್ಲಿ ಕನ್ನಡಿಗರಿಗೆ ಸಾಹಿತ್ಯ ಓದು, ಕನ್ನಡದ ಮಹತ್ವ ತಿಳಿಹೇಳುವ ಅಗತ್ಯವಿದೆ. ಶಿಕ್ಷಣದಲ್ಲಿ ಕನ್ನಡ ಮರೆತರೆ ಕ್ರಿಯಾಶೀಲ ಮಕ್ಕಳು, ಯುವಕರನ್ನು ರೂಪಿಸುವಲ್ಲಿ ವಿಫಲರಾಗುತ್ತೇವೆ. ಇಂತಹ ಸಂದರ್ಭಗಳಲ್ಲಿ ಸಾಂಸ್ಕೃತಿಕ ವಾತಾವರಣದಲ್ಲಿ ನಾಡು, ನುಡಿ ಕುರಿತು ಚಿಂತಿಸುವ ಅಗತ್ಯವಿದೆ. ಈ ಕಾರಣದಿಂದ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ರೂಪಿಸಲಾಯಿತು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ವಿವರಿಸಿದರು.