ಮೈತ್ರಿ ಅಭ್ಯರ್ಥಿಗಳಿಗೆ ಗೆಲುವು; ವಿಜಯೋತ್ಸವಕಾಂಗ್ರೆಸ್ ಭ್ರಷ್ಟ ಆಡಳಿತಕ್ಕೆ ಪ್ರಜ್ಞಾವಂತ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದರು. ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಡಾ.ಧನಂಜಯ್ ಸರ್ಜಿ, ಶಿಕ್ಷಕರ ಕ್ಷೇತ್ರದಿಂದ ಭೋಜೇಗೌಡ ಸ್ಪರ್ಧಿಸಿ ಇಬ್ಬರೂ ಪ್ರಥಮ ಪ್ರಾಶಾಸ್ತ್ಯ ಮತದಲ್ಲಿ ಭಾರಿ ಅಂತರದಿಂದ ಜಯಗಳಿಸಿದ್ದು ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ರಾಜ್ಯ ಕಾಂಗ್ರೆಸ್ ಭ್ರಷ್ಟ ಆಡಳಿತ ಒಂದೇ ವರ್ಷದಲ್ಲಿ ಮತದಾರರಿಗೆ ಬೇಸರ ಉಂಟಾಗಿದೆ. ಶಿಕ್ಷಕರ ಕೊರತೆ, ಶಿಕ್ಷಕರ ಸಮಸ್ಯೆ ಹಾಗೂ ಪದವೀಧರ ಸಮಸ್ಯೆಗೆ ಸ್ಪಂದಿಸದಿರುವ ಸರ್ಕಾರ ಮತದಾರರ ತಿರಸ್ಕರಿಸಿದ್ದಾರೆ.