ಮಲೆನಾಡಿಗರ ಪ್ರೀತಿಯಿಂದ ಹೃದಯ ತುಂಬಿದೆ: ರಘುಪತಿ ಭಟ್ನಾನು ಮಂಗಳೂರು, ಉಡುಪಿ ಮತದಾರರು ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ಧೈರ್ಯದಿಂದ ಸ್ಪರ್ಧಿಸಿದೆ. ಆದರೆ ಆ ಬಳಿಕ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಪ್ರವಾಸ ಮಾಡಿದಾಗ ಅಲ್ಲಿನ ಮತದಾರರು ನೀಡಿದ ಅದ್ಭುತ ಬೆಂಬಲ, ತೋರಿಸಿದ ಪ್ರೀತಿ, ಈಶ್ವರಪ್ಪ ನೇತೃತ್ವದ ರಾಷ್ಟ್ರಭಕ್ತರ ಬಳಗದ ಬೆಂಬಲ ಕಂಡು ಮೂಕ ವಿಸ್ಮಿತನಾಗಿದ್ದೇನೆ. ಜಾತಿ, ಜನಾಂಗ ಎಂಬ ಬೇಧವಿಲ್ಲದೆ, ಬಿಜೆಪಿ ಬಹುತೇಕ ಕಾರ್ಯಕರ್ತರು, ಸಂಘ ಪರಿವಾರದ ಬೆಂಬಲ ನನಗೆ ಸಿಕ್ಕಿದೆ.