ರೈತ ಚಳವಳಿ ನಾಯಕತ್ವದ 2ನೇ ಶಿಬಿರ 31ರಿಂದ ಆಯೋಜನೆ: ಕೆ.ಟಿ.ಗಂಗಾಧರ್ಕೃಷಿಯಲ್ಲಿನ ಬೆಳೆ ವೈವಿಧ್ಯತೆ, ಗೋ ಸಂಪತ್ತು, ಸಾವಯವ ಕೃಷಿ ಬಗ್ಗೆ ಯೋಜನಾ ಬದ್ಧವಾಗಿ ತರಬೇತಿ ನೀಡಿ ಮೂಲ ಬಂಡವಾಳ, ಆದಾಯ ಹೆಚ್ಚಳ ಬಗ್ಗೆ ರೈತರಿಗೆ ಸೂಕ್ತ ತರಬೇತಿ ಅಗತ್ಯ. ಅಗ್ರಿಕಲ್ಚರಲ್ ಇಂಜಿನಿಯರಿಂಗ್, ಆಗ್ರೋ ಇಂಜಿನಿಯರಿಂಗ್, ವಾಟರ್ ಮ್ಯಾನೇಜ್‌ಮೆಂಟ್ ಬಗ್ಗೆ ಸೂಕ್ತ ಮಾಹಿತಿ ದೊರಕಿಸುವುದು, ಕೃಷಿಯಲ್ಲಿನ ಸಮಸ್ಯೆಗಳ ಬಗ್ಗೆ ಹೋರಾಟದ ಮೂಲಕ ಮುಂದಿನ ಪೀಳಿಗೆ ಸಜ್ಜುಗೊಳಿಸಲು ರಾಜ್ಯ ರೈತ ಸಂಘ ಸಾಮೂಹಿಕ ನಾಯಕತ್ವದಲ್ಲಿ ಶ್ರಮಿಸುತ್ತಿದೆ.