ಸಂಚಾರಿ ನಿಯಮಗಳ ಪಾಲಿಸದಿರುವುದು ಅನಾಗರಿಕ ವರ್ತನೆ: ಸಿಪಿಐ ರಾಮಚಂದ್ರದೇಶಕ್ಕೆ ಭವಿಷ್ಯದ ಭದ್ರ ಬುನಾದಿ ಎಂದರೆ ಯುವಜನತೆ, ಈ ಯುವಜನರು ರಸ್ತೆ ಸುರಕ್ಷತಾ ನಿಯಮಗಳ ಪಾಲಿಸದೇ ಅನಾಗರಿಕ ವರ್ತನೆ, ತಿಳಿವಳಿಕೆ ಕೊರತೆ ಹಾಗೂ ಪೋಷಕರ ಮಾತುಗಳ ಕೇಳದೆ ಮನ ಬಂದತೆ ದ್ವಿಚಕ್ರ ವಾಹನಗಳ ಅತಿ ವೇಗವಾಗಿ ಓಡಿಸಿ ಅಪಘಾತಕ್ಕೆ ಈಡಾಗುತ್ತಿದ್ದಾರೆ. ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತೆ ವಿನಾ ಕಡಿಮೆ ಆಗುತ್ತಿಲ್ಲ. ಹೀಗಾಗಿ ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳ ಅನುಸರಿಸಬೇಕು.