ಮೂಡುಗೋಡು ಗ್ರಾಮದಲ್ಲಿ ಗೋದಾಮಿನಿಂದ ಮತ್ತೆ ಅಡಕೆ ಕಳವುಗ್ರಾಮದ ಜಯಕುಮಾರ್ ಎಂಬವರು ಮನೆ ಪಕ್ಕದಲ್ಲಿ ಅಡಕೆ ಗೋದಾಮು ನಿರ್ಮಿಸಿಕೊಂಡು ತಾವು ಬೆಳೆದ ಸುಮಾರು ೨೦೦ ಕ್ವಿಂಟಾಲ್ ಸಿಪ್ಪೆ ಅಡಿಕೆ, ೧೦ ಕ್ವಿಂಟಾಲ್ ಕೆಂಪು ಅಡಿಕೆ ಹಾಗೂ ೧೭ಕ್ವಿಂಟಾಲ್ ಗೇರು ಬೀಜವನ್ನು ಸಂಗ್ರಹಿಸಿದ್ದರು. ಮಂಗಳವಾರ ಬೆಳಗ್ಗೆ ಗೋದಾಮಿಗೆ ತೆರಳಿದಾಗ ಕಳವು ಆಗಿರುವುದು ಬೆಳಕಿಗೆ ಬಂದಿದೆ. ಕಳ್ಳರು ಗೋದಾಮಿನ ಬೀಗ ಮುರಿದು ಗೋದಾಮಿನಲ್ಲಿದ್ದ ೩.೫ ಲಕ್ಷ ರು., ಮೌಲ್ಯದ ಸುಮಾರು ೧೪ ಕ್ವಿಂಟಾಲ್ ಒಣ ಸಿಪ್ಪೆ ಗೋಟು ಅಡಕೆಯನ್ನು ಕಳ್ಳತನ ಮಾಡಿದ್ದಾರೆ.