ಜಗತ್ತಿನ ಇಚ್ಛೆಯಂತೆ ಶಿವಯೋಗಿ ಇರಲಾರ: ಅಮರೇಶ್ವರ ಶ್ರೀಶಿವಯೋಗಿಯ ಜಗತ್ತು ಯೋಗಿ, ಹುಚ್ಚ, ಪೆದ್ದ ಏನೇ ಅನ್ನಲಿ ಆತ ಯಾವುದಕ್ಕೂ ಚಿಂತಿಸುವುದಿಲ್ಲ. ಜಗತ್ತಿನ ಒಳಿತಿಗೆ ಮಹಾಧ್ಯಾನಿಯಾಗಿರುತ್ತಾನೆ. ಆತ್ಮ ಸಾಧನೆ ಮಾಡುತ್ತಾ ಜಂಗಮರು, ತಮಗೆ ಆಧ್ಯಾತ್ಮದಲ್ಲಿ ಅನುಭವಕ್ಕೆ ಬಂದ ಕೆಲವು ಸಿದ್ಧಿಗಳ, ತತ್ವಗಳ ಲೋಕ ಕಲ್ಯಾಣಾರ್ಥವಾಗಿ ಭಕ್ತರಿಗೆ ಕರುಣಿಸುತ್ತಾ ಇಲ್ಲಿ ಬಂದು ಗದ್ದುಗೆಯಲ್ಲಿ ವಿರಾಜಾಮಾನರಾಗಿದ್ದಾರೆ.