ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಬಿಜೆಪಿಗೆ ಮುನ್ನಡೆಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೇ ತಮ್ಮ ತವರು ಕ್ಷೇತ್ರ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆಗೆ ಅವಕಾಶ ಕೊಟ್ಟು ಬದಿಗೆ ಸರಿದಿದ್ದಾರೆ. ದಿ. ಬಂಗಾರಪ್ಪ ಹೆಸರನ್ನೇ ಮುಂದಿಟ್ಟು ಚುನಾವಣಾ ಕಣದಲ್ಲಿ ಪ್ರಚಾರ ಮಾಡಿದ್ದ ಮಧು ಬಂಗಾರಪ್ಪ ಸೋದರಿ ಗೀತಾ ತಮ್ಮ ತಂದೆಯ ಹೆಸರೇ ತಮ್ಮನ್ನು ಗೆಲ್ಲಿಸುತ್ತದೆ ಎಂಬ ನಂಬಿಕೆಗೆ ಅವರ ತವರು ಕ್ಷೇತ್ರದ ಮತದಾರರೇ ಕೈಕೊಟ್ಟಿದ್ದಾರೆ. ಬಂಗಾರಪ್ಪ ಹೆಸರಾಗಲೀ, ಖ್ಯಾತ ನಟ ರಾಜ್ ಕುಟುಂಬದ ಹೆಸರಾಗಲೀ ಮತದಾರರ ಮೇಲೆ ಯಾವುದೇ ಮೋಡಿ ಮಾಡಲಿಲ್ಲ.