ಋತುಬಂಧವನ್ನು ಮನೋಸ್ಥೈರ್ಯದಿಂದ ಎದುರಿಸಿಋತುಬಂಧ (ಮೋನೋಪಾಸ್) ನೈಸರ್ಗಿಕ ಹಾಗೂ ಜೈವಿಕ ಪ್ರಕ್ರಿಯೆಯಾಗಿದ್ದು, ಸುಮಾರು 40 ವರ್ಷ ನಂತರದ ಮಹಿಳೆಯರಲ್ಲಿ ಇದು ಸಾಮಾನ್ಯ. ಋತುಬಂಧದ ಸಮಯದಲ್ಲಿ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಸಹಜ. ಮನೋಸಾಮರ್ಥ್ಯದಿಂದ ಇದನ್ನು ಎದುರಿಸಬೇಕು ಎಂದು ಟಿಎಂಎಇಎಸ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಜಿ.ಎ. ಹಿರೇಮಠ ಹೇಳಿದರು