ಅರಿವೇ ಗುರು ಎಂಬುದಕ್ಕೆ ಮಾಚಿದೇವರೇ ಜ್ವಲಂತ ನಿದರ್ಶನ12ನೇ ಶತಮಾನದಲ್ಲಿ ಜಾತಿ ಪದ್ಧತಿ, ಅಸಮಾನತೆ ಪೆಡಂಭೂತದಂತೆ ಇತ್ತು. ದಾರ್ಶನಿಕರ, ಶರಣರ ಹೋರಾಟ ಪ್ರತಿಭಟನೆಯಿಂದ, ಆ ಧ್ವನಿಯಿಂದಾಗಿ ಇಂದು ನೆಮ್ಮದಿಯಿಂದ ಇದ್ದೇವೆ. ಒಬ್ಬ ವ್ಯಕ್ತಿಯ ಸನ್ನಡತೆ, ಉತ್ತಮ ವ್ಯಕ್ತಿತ್ವದಿಂದ ಮಾನ್ಯನಾಗುತ್ತಾನೆ. ಮಾಚಿದೇವ ಅವರ ಸನ್ನಡತೆಯಿಂದ ಬಿಜ್ಜಳ ಮಹಾರಾಜರೇ ಸ್ವತಃ ಅವರ ಮನೆಗೆ ಬರುತ್ತಾರೆ. ಎಷ್ಟೇ ಕಷ್ಟವಾದರೂ ನುಡಿದಂತೆ ನಡೆದ ಶ್ರೇಷ್ಠ ಪರಂಪರೆ ಮಾಚಿದೇವರ ಅವರದು. ಅಕ್ಕ ಮಹಾದೇವಿ ಸಹ ಮಾಚಿದೇವ ಅವರನ್ನು ತಮ್ಮ ತಂದೆ ಎನ್ನುತ್ತಾರೆ. ಇದು ನಮ್ಮ ಸಂಸ್ಕೃತಿಯ ಹೆಗ್ಗಳಿಕೆ ಎಂದ ಅವರು, ಅರಿವು ಇದ್ದರೆ ಗುರು ಆಗಬಹುದು ಎಂಬುದಕ್ಕೆ ಶ್ರೀ ಮಡಿವಾಳ ಮಾಚಿದೇವ ಅವರೇ ಜ್ವಲಂತ ನಿದರ್ಶನ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.