3000 ಹಾಫ್ ಹೆಲ್ಮೆಟ್, 70 ಸೈಲೆನ್ಸರ್ಗಳ ತಿಂದು ತೇಗಿದ ರೋಡ್ ರೋಲರ್!ಶಿವಮೊಗ್ಗ ನಗರದಲ್ಲಿ ವಶಪಡಿಸಿಕೊಂಡಿದ್ದ ಹಾಫ್ ಹೆಲ್ಮೆಟ್ಗಳು, ಕರ್ಕಶ ಶಬ್ದ ಮಾಡುವ ಸೈಲೆನ್ಸರ್ಗಳನ್ನು ಗುರುವಾರ ಸಂಜೆ ಸಂಚಾರ ಠಾಣೆ ಪೊಲೀಸರು ಗೋಪಿ ಸರ್ಕಲ್ನಲ್ಲಿ ರೋಡ್ ರೋಲರ್ ಹತ್ತಿಸಿ, ನಾಶಪಡಿಸಿದರು. ಗೋಪಿ ಸರ್ಕಲ್ನಲ್ಲಿ ಎಲ್ಲವನ್ನು ಸಾಲಾಗಿ ಜೋಡಿಸಿ, ಅವುಗಳ ಮೇಲೆ ರೋಡ್ ರೋಲರ್ ಹತ್ತಿಸಲಾಯಿತು. ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಸಂಚಾರ ಠಾಣೆ ಇನ್ಸ್ಪೆಕ್ಟರ್ ಸಂತೋಷ್ಕುಮಾರ್ ಸೇರಿದಂತೆ ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆ ಸಿಬ್ಬಂದಿ ಇದ್ದರು. ಕಾರ್ಯಾಚರಣೆ ವೀಕ್ಷಿಸಲು ಗೋಪಿ ಸರ್ಕಲ್ನಲ್ಲಿ ದೊಡ್ಡ ಸಂಖ್ಯೆಯ ಜನರು ಜಮಾಯಿಸಿದ್ದರು.