ಇಂದು ಎಸ್.ರುದ್ರೇಗೌಡರಿಗೆ ಅಭಿನಂದನೆ: ಪ್ಲೇಟ್ ಬ್ಯಾಂಕ್ ಲೋಕಾರ್ಪಣೆಖ್ಯಾತ ಕೈಗಾರಿಕೋದ್ಯಮಿ ಹಾಗೂ ವಿಧಾನ ಪರಿಷತ್ತು ಸದಸ್ಯ ಎಸ್.ರುದ್ರೇಗೌಡ ಅವರ ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ಜ.27ರಂದು ಪ್ಲೇಟ್ ಬ್ಯಾಂಕ್ನ್ನು ಅಭಿನಂದನಾ ಸಮಿತಿಯು ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘಕ್ಕೆ ಲೋಕಾರ್ಪಣೆಗೊಳಿಸಲಿದೆ. ಬಸವೇಶ್ವರ ವೀರಶೈವ ಸೇವಾ ಸಮಾಜ, ಎಸ್.ರುದ್ರೇಗೌಡರ ಅಭಿನಂದನಾ ಸಮಿತಿ, ರುದ್ರೇಗೌಡರ ಅಭಿಮಾನಿ ಬಳಗದ ಸಹಯೋಗದಲ್ಲಿ ಈ ಯೋಜನೆಯನ್ನು ಬೆಂಗಳೂರಿನ ಅದಮ್ಯ ಚೇತನ ಫೌಂಡೇಷನ್ನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಲೋಕಾರ್ಪಣೆ ಮಾಡಲಿದ್ದಾರೆ. ಸಾರ್ವಜನಿಕರು ಹಮ್ಮಿಕೊಳ್ಳುವ ಯಾವುದೇ ಸಭೆ, ಸಮಾರಂಭ ಇತರೆ ಕಾರ್ಯಗಳಲ್ಲಿ ಪ್ಲಾಸ್ಟಿಕ್, ಪೇಪರ್ ತಟ್ಟೆಗಳನ್ನು ಬಳಸದೇ ಶೂನ್ಯ ತ್ಯಾಜ್ಯ ಪದ್ಧತಿ ಪ್ರೋತ್ಸಾಹಿಸುವುದು ಇದರ ಉದ್ದೇಶ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಡಿ.ಜಿ. ಬೆನಕಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.