ಕೆರೆಹಳ್ಳಿ ಜನಸ್ಪಂದನ ಸಭೆಯಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕಾರಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ವಿಧಿಸುತ್ತಿರುವ ಮನೆ, ನಿವೇಶನ, ಸಣ್ಣ ಕೈಗಾರಿಕೆಗಳು, ಅಂಗಡಿಗಳ ಪರಿಷ್ಕೃತ ತೆರಿಗೆ ದುಪ್ಪಾಟ್ಟಾಗಿದೆ. ಇದರಿಂದ ಕೂಲಿ ಕಾರ್ಮಿಕರು, ರೈತರು, ಬಡವರಿಗೆ ಕಷ್ಟವಾಗುತ್ತಿದೆ. ತೆರಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ತೆರಿಗೆ ಪರಿಷ್ಕರಣೆ ಮರುಪರಶೀಲನೆ ನಡೆಸಿ, ಈ ಹಿಂದಿನ ಕಂದಾಯ ಪದ್ಧತಿಯನ್ನೇ ಮರುಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕರ ಪರವಾಗಿ ಜೆ.ಎಸ್.ಚಂದ್ರಪ್ಪ ಅವರು ಕೆರೆಹಳ್ಳಿ ಹೋಬಳಿಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಮನವಿ ಸಲ್ಲಿಸಿದರು.