5ರಿಂದ ಕ್ಯಾನ್ಸರ್ ಜಾಗೃತಿ ಸಪ್ತಾಹ: ಡಾ.ಅಪರ್ಣ ಶ್ರೀವತ್ಸಶಿವಮೊಗ್ಗ ನಗರದ ಕುವೆಂಪು ರಸ್ತೆಯ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೆ.5ರಿಂದ 10ರವರೆಗೆ ಕ್ಯಾನ್ಸರ್ ಜಾಗೃತಿ ಸಪ್ತಾಹ ಏರ್ಪಡಿಸಲಾಗಿದೆ. ಈ ಜಾಗೃತಿ ಸಪ್ತಾಹದಲ್ಲಿ ಡಾ.ವಿವೇಕ್, ಡಾ. ಆಶಾಶ್ರೀ ಉಪಾಧ್ಯ, ಡಾ.ಮಧು, ಡಾ.ಶಿಲ್ಪಾ ಪ್ರಭು ಹಾಗೂ ಡಾ.ರವಿ ಅವರು ಕ್ಯಾನ್ಸರ್ ರೋಗಿಗಳಿಗೆ ಜೀವನಶೈಲಿ, ಆಹಾರ ಪದ್ಧತಿ, ಯೋಗ ಮತ್ತು ವ್ಯಾಯಾಮ, ಶಸ್ತ್ರಚಿಕಿತ್ಸೆ ಕುರಿತು ಸಲಹೆ ಮತ್ತು ಸಮಾಲೋಚನೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಫೆ.4ರಂದು ಕ್ಯಾನ್ಸರ್ ದಿನ ಹಿನ್ನೆಲೆ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ನಲ್ಲಿ ಪ್ರತಿ ತಿಂಗಳು ಮೊದಲನೇ ಗುರುವಾರ ಕ್ಯಾನ್ಸರ್ ಸಮಸ್ಯೆ ಗೆದ್ದವರೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದು ಆಸ್ಪತ್ರೆಯ ಮೆಡಿಕಲ್ ಅಂಕಾಲಜಿಸ್ಟ್ ಡಾ.ಅಪರ್ಣ ಶ್ರೀವತ್ಸ ಹೇಳಿದ್ದಾರೆ.