ಪರಮೇಶ್ವರ ದೂಗೂರು ಮೇಲಿನ ಸುಳ್ಳು ಪ್ರಕರಣ ಹಿಂಪಡೆಯಬೇಕುದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪರಮೇಶ್ವರ ದೂಗೂರು ಅವರ ಮೇಲೆ ದಾಖಲಿಸಿರುವ ಐದು ಸುಳ್ಳು ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು. ಕಳೆದೆರಡು ದಶಕಗಳಿಂದ ಪರಮೇಶ್ವರ ದೂಗೂರು ದಲಿತರು, ಹಿಂದುಳಿದವರು ಮತ್ತು ನೊಂದವರಿಗೆ ನ್ಯಾಯ ದೊರಕಿಸಲು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ದೂಗೂರು ಅವರ ಮೇಲೆ ಹಗೆತನ ಸಾಧಿಸಲು ಬೇರೆ ಬೇರೆ ರೀತಿಯ ಪಿತೂರಿ ನಡೆಯುತ್ತಿದೆ ಆರೋಪಿಸಿ, ಎಂದು ಸೋಮವಾರ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ಉಪವಿಭಾಗಾಧಿಕಾರಿ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.