ಸಂಚಾರಕ್ಕೆ ಸಿಗ್ನಲ್, ಕಂದಾಯ ವಸೂಲಿ, ಇ-ಸ್ವತ್ತು, ಬೀದಿದೀಪ ಕಲ್ಪಿಸಿಶಿರಾಳಕೊಪ್ಪ ಪುರಸಭೆಯ ಯಡಿಯೂರಪ್ಪ ಸಭಾಂಗಣದಲ್ಲಿ 2024-25ನೇ ಆರ್ಥಿಕ ವರ್ಷದ ಆಯವ್ಯಯ ಸಿದ್ಧಪಡಿಸಲು ಮಂಗಳವಾರ ಪುರಸಭೆಯಲ್ಲಿ ಸಾವರ್ಜನಿಕರೊಂದಿಗೆ ಆಡಳಿತಾಧಿಕಾರಿ ಹಾಗೂ ನೂತನ ಉಪವಿಭಾಧಿಕಾರಿ ಯತೀಶ್ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು. ಸಭೆಯಲ್ಲಿ ಸದಸ್ಯರು, ಸಾರ್ವಜನಿಕರು ಸಂಚಾರ ವ್ಯವಸ್ಥೆ, ಬೀದಿದೀಪ, ಕಂದಾಯ ಇನ್ನಿತರೆ ವಿಷಯಗಳ ಬಗ್ಗೆ ಸೂಕ್ತ ವ್ಯವಸ್ಥೆ, ಕ್ರಮಕ್ಕೆ ಆಗ್ರಹಿಸಿದ್ದಾರೆ.