ಭಕ್ತಿ, ನಿಷ್ಠೆಯಿಂದ ವೃತ್ತಿಗೆ ಘನತೆ ತಂದ ಅಂಬಿಗರ ಚೌಡಯ್ಯ ಭಕ್ತಿ ಮತ್ತು ನಿಷ್ಠೆಯ ಕಾಯಕದ ಮೂಲಕ ನಿಜಶರಣ ಅಂಬಿಗರ ಚೌಡಯ್ಯ ವೃತ್ತಿಗೆ ಘನತೆ ತಂದುಕೊಟ್ಟಿದ್ದಾರೆ. 12ನೇ ಶತಮಾನದಲ್ಲಿ ಸಮಾಜದಲ್ಲಿ ಅಸಮಾನತೆ, ಶೋಷಣೆ, ಮೇಲುಕೀಳು, ಕಂದಾಚಾರ, ಮೂಢನಂಬಿಕೆ ಉತ್ತುಂಗದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಬಸವೇಶ್ವರರು ಜಾತಿ ಅಸಮಾನತೆ ಹೋಗಲಾಡಿಸಿ ಸಮಸಮಾಜ ನಿರ್ಮಾಣಕ್ಕಾಗಿ ಬದುಕನ್ನು ಮುಡಿಪಾಗಿಟ್ಟು ಶ್ರಮಿಸಿದ್ದರು. ಅವರೊಂದಿಗೆ ಸಮಸಮಾಜಕ್ಕಾಗಿ ಶ್ರಮಿಸಿದ ಶರಣರಲ್ಲಿ ಅಂಬಿಗರ ಚೌಡಯ್ಯ ಪ್ರಮುಖರಾಗಿದ್ದರು ಎಂದು ಶಿಕಾರಿಪುರದಲ್ಲಿ ಉಪನ್ಯಾಸಕ ಕೆ.ಎಚ್ ಪುಟ್ಟಪ್ಪ ಹೇಳಿದ್ದಾರೆ.