ಹೊಸ ದೇಗುಲಕ್ಕಿಂತ ಈಗಿರುವ ಗುಡಿಗಳ ಪುನರುಜ್ಜೀವನ ಅಗತ್ಯ: ಕಿಮ್ನನೆ ರತ್ನಾಕರ್ ಕೋದಂಡರಾಮ ದೇಗುಲ ಮೂರು ಶತಮಾನಗಳ ಹಿಂದಿನದಾಗಿದೆ. ನನ್ನ ಬಾಲ್ಯದಿಂದ ಈ ದೇಗುಲ ನೋಡುತ್ತಿದ್ದೇನೆ. ತುಂಗಾನದಿ ತೀರದ ಸುಂದರ ವಾತಾವರಣದ ನಡುವೆ ಪುರಾಣ ಪ್ರಸಿದ್ಧ ರಾಮೇಶ್ವರ ದೇವಸ್ಥಾನ ಸಮೀಪದಲ್ಲಿರುವ ಈ ದೇವಸ್ಥಾನ ಶಿಲ್ಪಕಲೆಯಿಂದ ಸುಂದರವಾಗಿದೆ. ದೇಶದಲ್ಲಿ ಹೊಸ ದೇವಸ್ಥಾನಗಳನ್ನು ನಿರ್ಮಿಸಿ, ಸಮಸ್ಯೆಗಳನ್ನು ಸೃಷ್ಟಿ ಮಾಡುವುದಕ್ಕಿಂತ, ಇರುವ ದೇವಸ್ಥಾನಗಳನ್ನೇ ಪುನರುಜ್ಜೀವನಗೊಳಿಸಿ, ಅವುಗಳನ್ನು ಉತ್ತಮ ಸ್ಥಿತಿಯಲ್ಲಿಡುವುದು ಸೂಕ್ತ ಎಂದು ಕಾಂಗ್ರೆಸ್ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ ಪಟ್ಟಣದಲ್ಲಿ ಹೇಳಿದ್ದಾರೆ.