ಮನುಕುಲ ಏಳಿಗೆಗೆ ಶ್ರಮಿಸಿದ ಮಹನೀಯ ಕವಿ ವೇಮನಯೋಗಿ ವೇಮನ ವಚನ ಸಾಹಿತ್ಯದಲ್ಲಿ ವಿಶೇಷ ಕೃಷಿ ಮಾಡಿದರು. ವಾಸ್ತವ ಬದುಕಿಗೆ ಹತ್ತಿರ ಆಗಿರುವಂತೆ, ಜನಸಾಮಾನ್ಯರಿಗೆ ಅರ್ಥವಾಗುವ ಸರಳ, ಸುಲಭ ಭಾಷೆಯಲ್ಲಿ ಕವಿತೆಗಳನ್ನು ರಚಿಸಿದ್ದಾರೆ. ಅವರ ಮೌಲ್ಯಯುತ ಸಾಹಿತ್ಯ ದೇಶದ ಬೇರೆ ಬೇರೆ ಭಾಷೆಗಳಿಗೆ ತರ್ಜುಮೆಗೊಂಡಿದ್ದು, ಅಪಾರ ಸಂಖ್ಯೆಯ ಓದುಗರನ್ನು ತಲುಪಿದೆ. 15ನೇ ಶತಮಾನದ ಈ ಪ್ರಸಿದ್ಧ ಈತೆಲುಗು ಕವಿ ಮನುಕುಲದ ಏಳಿಗೆಗಾಗಿ ಶ್ರಮಿಸಿದ ಮಹನೀಯರು. ಅವರ ಸಾಹಿತ್ಯ ಸಾರ್ವಕಾಲಿಕ ಮೌಲ್ಯಗಳನ್ನು ಹೊಂದಿವೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಶಿವಮೊಗ್ಗದಲ್ಲಿ ಸ್ಮರಿಸಿದ್ದಾರೆ.